ವಿಶ್ವದ ಟಾಪ್‌ 7 ಶ್ರೀಮಂತ ವ್ಯಕ್ತಿಗಳು ಯಾರು ಗೊತ್ತಾ?

ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನ, ಉದ್ಯಮಶೀಲತೆ ಹಾಗೂ ಹೊಸ ಆವಿಷ್ಕಾರಗಳ ಮೂಲಕ ಅನೇಕರು ಅಪಾರ ಐಶ್ವರ್ಯವನ್ನು ಸಂಪಾದಿಸಿದ್ದಾರೆ. ಬಿಲಿಯನ್‌ ಡಾಲರ್‌ಗಳ ಕಂಪನಿಗಳನ್ನು ಸ್ಥಾಪಿಸಿ ವಿಶ್ವಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ ಈ ಉದ್ಯಮಿಗಳು ಕೇವಲ ಧನಿಕರೆಷ್ಟೇ ಅಲ್ಲ, ತಂತ್ರಜ್ಞಾನ, ಮತ್ತು ಸಾಮಾಜಿಕ ಬದಲಾವಣೆಯ ಹಾದಿಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಎಲಾನ್ ಮಸ್ಕ್

ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಮಸ್ಕ್, ಕಾನಡಾ ಹಾಗೂ ನಂತರ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡಿದನು. ಇವರು ಆರಂಭದಲ್ಲಿ Zip2, ನಂತರ PayPal ಸ್ಥಾಪನೆ ಮೂಲಕ ತಂತ್ರಜ್ಞಾನದ ಪ್ರಪಂಚಕ್ಕೆ ಕಾಲಿಟ್ಟರು. ನಂತರ SpaceX ಮೂಲಕ ಅಂತರಿಕ್ಷ ವಿಜ್ಞಾನದಲ್ಲಿ ಖಾಸಗಿ ಹಾದಿ ತೆರೆದರು. Tesla ಮೂಲಕ ವಿದ್ಯುತ್ ವಾಹನ ಕ್ರಾಂತಿಗೆ ಮುನ್ನಡೆದವರು. ಅವರ ಪ್ರಯತ್ನಗಳು ಇಂಧನದ ಪರ್ಯಾಯ ಮಾರ್ಗ, ಹವಾಮಾನ ಪರಿವರ್ತನೆಗೆ ಉತ್ತರ, ಮಾನವ ಜಾತಿಯ ಮಂಗಳ ಗ್ರಹ ಪ್ರವಾಸದ ಕನಸು ಮುಂತಾದನ್ನು ಒಳಗೊಂಡಿದೆ. ಪ್ರಪಂಚದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮಸ್ಕ್ ಮೊದಲ ಸ್ಥಾನದಲ್ಲಿದ್ದರೆ, ಅದರ ಹಿಂದೆ ಇರುವ ಕಾರಣ ಇವರ ನಾವೀನ್ಯತೆ ಮತ್ತು ದಿಟ್ಟ ನಿರ್ಧಾರಗಳೇ.

ಬರ್ನಾರ್ಡ್ ಅರ್ಣಾಲ್ಟ್

ಅರ್ಣಾಲ್ಟ್ ಅವರು ಅನೇಕ ಫ್ರಾನ್ಸ್ ಕಂಪನಿಗಳನ್ನು ಖರೀದಿ ಮಾಡಿ ಅವುಗಳನ್ನು ವಿಶಿಷ್ಟ ಮಾರುಕಟ್ಟೆ ತಂತ್ರದ ಮೂಲಕ ಲಾಭದಾಯಕವಾಗಿ ಪರಿವರ್ತಿಸಿದರು. ಅರ್ಣಾಲ್ಟ್ ಕುಟುಂಬ ಸಹೀತ ಕಂಪನಿಯ ಹಲವಾರು ನಿರ್ಧಾರಗಳಲ್ಲಿ ನೇರವಾಗಿ ಪಾಲ್ಗೊಳ್ಳುತ್ತಾರೆ. ಅವರು ಲಲಿತಕಲೆಗಳ ಹಿತೈಷಿಯಾಗಿ, ವಿಶ್ವದ ಅನೇಕ ಕಲಾ ಮ್ಯೂಸಿಯಂ‌ಗಳಿಗೆ ನೆರವು ನೀಡಿರುವುದು ಸಹ ಅವರ ವ್ಯಕ್ತಿತ್ವವನ್ನು ವಿಭಿನ್ನವಾಗಿ ತೋರಿಸುತ್ತದೆ.

ಜೆಫ್ ಬೆಜೋಸ್

Amazon ಸಂಸ್ಥಾಪಕರಾದ ಜೆಫ್ ಬೆಜೋಸ್ ಇ-ಕಾಮರ್ಸ್ ಕ್ಷೇತ್ರದಲ್ಲಿ ಕ್ರಾಂತಿ ತಂದ ಉದ್ಯಮಿಯಾಗಿದ್ದಾರೆ. ಈ ಕಂಪನಿಯ ಸೇವೆಗಳು ಇ-ಕಾಮರ್ಸ್, ಕ್ಲೌಡ್ ಕಂಪ್ಯೂಟಿಂಗ್ (AWS), ಸ್ಟ್ರೀಮಿಂಗ್ ಸೇವೆಗಳಿಂದ ಆರಂಭಿಸಿ ಉಪಗ್ರಹ ಲಾಂಚ್‌ನವರೆಗೆ ವಿಸ್ತರಿಸಿರುವುದರಿಂದ ಬೆಜೋಸ್ ಅವರ ದೃಷ್ಠಿ ವ್ಯಾಪ್ತಿ ಎಷ್ಟು ವಿಶಾಲವಿದೆ ಎಂಬುದು ತಿಳಿಯುತ್ತದೆ. ಅವರು ಬ್ಲೂ ಒರಿಜಿನ್ ಎಂಬ ಖಾಸಗಿ ಬಾಹ್ಯಾಕಾಶ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ. ಇವರು ತಮ್ಮ ದೃಢ ದೃಷ್ಟಿಕೋಣ, ಸಮಯದ ಮುನ್ನೋಟ ಹಾಗೂ ನಿರಂತರ ಪ್ರಗತಿಶೀಲ ಯತ್ನಗಳಿಂದ ಪ್ರಪಂಚದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಮಾರ್ಕ್ ಝುಕೆರ್ಬರ್ಗ್

Facebook ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿರುವ ಮಾರುಕ್ ಝುಕೆರ್ಬರ್ಗ್, ಸಾಮಾಜಿಕ ಮಾಧ್ಯಮ ಕ್ರಾಂತಿಯ ಪಿತಾಮಹ ಎಂದು ಪರಿಗಣಿಸಬಹುದು. ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಇವರು ಸ್ನೇಹಿತರ ಸಂಪರ್ಕಕ್ಕಾಗಿ ಆರಂಭಿಸಿದ ಪ್ರಾಜೆಕ್ಟ್, ಇಂದಿನ ದಿನದಲ್ಲಿ ಜಗತ್ತಿನ ಅತಿದೊಡ್ಡ ಸಾಮಾಜಿಕ ಜಾಲತಾಣವಾಗಿ ಪರಿಗಣಿಸಲಾಗಿದೆ. Meta ಕಂಪನಿಯು Instagram, WhatsApp ಮುಂತಾದ ಅನೇಕ ದಿಗ್ಗಜ ಸೇವೆಗಳನ್ನು ಕೂಡ ಹೊಂದಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ಝುಕೆರ್ಬರ್ಗ್, Metaverse ಸಂಶೋಧನೆ ಹಾಗೂ ವಿಸ್ತರಣೆ ಮೂಲಕ ಭವಿಷ್ಯದ ಡಿಜಿಟಲ್ ಜಗತ್ತಿಗೆ ದಾರಿತೋರಿಸುತ್ತಿದ್ದಾರೆ. ಯುವ ಉದ್ಯಮಶೀಲರಿಗಾಗಿ ಅವರು ಆದರ್ಶ ಮಾದರಿಯಾಗಿದ್ದಾರೆ.

ವಾರೆನ್ ಬಫೆಟ್

ಅಮೆರಿಕದ ಬರ್ಕ್‌ಶೈರ್ ಹ್ಯಾಥವೇ ಸಂಸ್ಥೆಯ ಮುಖ್ಯಸ್ಥರಾದ ವಾರೆನ್ ಬಫೆಟ್, ಜಗತ್ತಿನ ಅತ್ಯಂತ ಯಶಸ್ವಿ ಹೂಡಿಕಾದಾರರಲ್ಲಿ ಒಬ್ಬರಾಗಿದ್ದಾರೆ. ಬಹುಶಃ, ಹೂಡಿಕೆ ಕ್ಷೇತ್ರದಲ್ಲಿ ದೀರ್ಘಕಾಲಿಕ ದೃಷ್ಟಿಕೋಣ ಮತ್ತು ಶಿಸ್ತಿನಂತೆ ದುಡಿಯುವುದರಲ್ಲಿ ಅವರು ಮಾದರಿ. ಅವರು ಬಾಲ್ಯದಿಂದಲೇ ಹೂಡಿಕೆಯಲ್ಲಿ ಆಸಕ್ತಿ ಹೊಂದಿದ್ದು, ಮೌಲ್ಯ ಆಧಾರಿತ ಹೂಡಿಕೆ ತಂತ್ರದಿಂದ ಅನೇಕ ಸಂಸ್ಥೆಗಳಲ್ಲಿ ಬಂಡವಾಳ ಹೂಡಿಕೆ ಮಾಡಿ ಬಿಲಿಯನ್‌ ಡಾಲರ್ ಗಳಿಸಿದ್ದಾರೆ. ಬಫೆಟ್ ಅವರ ಸರಳ ಜೀವನ ಶೈಲಿ ಮತ್ತು ದಾನಶೀಲತೆ, ಇಂದಿನ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದೆ. ಅವರು ತಮ್ಮ ಸಂಪತ್ತಿನ ಬಹುಭಾಗವನ್ನು ದಾನ ಮಾಡುವುದಾಗಿ ಘೋಷಿಸಿರುವುದು ಸಹ ಮಾನವೀಯತೆಯ ತಳಹದಿಯನ್ನು ತೋರಿಸುತ್ತದೆ.

ಲೀರಿ ಎಲಿಸನ್

Oracle ಸಂಸ್ಥಾಪಕ ಲ್ಯಾರಿ ಎಲಿಸನ್ ಕೂಡ ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ. ಡೇಟಾಬೇಸ್ ತಂತ್ರಜ್ಞಾನದಲ್ಲಿ ಕ್ರಾಂತಿ ತಂದ ಈ ಸಂಸ್ಥೆಯು ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸಿತು. ಎಲಿಸನ್ ಅವರು ತಂತ್ರಜ್ಞಾನ ಮತ್ತು ಬಿಸಿನೆಸ್‌ ಅನ್ನು ಸಮರ್ಥವಾಗಿ ಬೆಳೆಸಿದವರು. ಅವರು Sun Microsystems, NetSuite ಮುಂತಾದ ಹಲವಾರು ಟೆಕ್ ಕಂಪನಿಗಳನ್ನು ಖರೀದಿ ಮಾಡುವ ಮೂಲಕ Oracle ನ ಸಾಮ್ರಾಜ್ಯವನ್ನು ವಿಸ್ತರಿಸಿದರು. ಎಲಿಸನ್ ಅವರ ನಾಯಕತ್ವ ಮತ್ತು ತಂತ್ರಜ್ಞಾನ ಜ್ಞಾನ, ನೂತನ ತಂತ್ರಜ್ಞಾನಗಳನ್ನು ಅನ್ವಯಿಸುತ್ತಾ ಕಂಪನಿಯನ್ನು ಹಾದಿ ಹಿಡಿಯುವಲ್ಲಿ ಅತ್ಯಂತ ಮುಖ್ಯವಾಗಿದೆ. ಅವರು ವೈವಿಧ್ಯಮಯ ಹೂಡಿಕೆಗಳ ಮೂಲಕ ತಮ್ಮ ಸಂಪತ್ತನ್ನು ಮುಂದುವರಿಸುತ್ತಿದ್ದಾರೆ.

ಬಿಲ್ ಗೇಟ್ಸ್

ಬಿಲ್ ಗೇಟ್ಸ್ ಎಂಬ ಹೆಸರು ಕೇಳಿದರೂ, ತಕ್ಷಣ Microsoft ಎಂಬ ಸಂಸ್ಥೆ ನೆನಪಾಗುತ್ತದೆ. ಗೇಟ್ಸ್ ತಮ್ಮ ಗೆಳೆಯ ಪೌಲ್ ಆಲೆನ್ ಜೊತೆ ಸೇರಿ 1975ರಲ್ಲಿ Microsoft ಅನ್ನು ಸ್ಥಾಪಿಸಿದರು. ಈ ಕಂಪನಿ ಪ್ರಪಂಚದ ನಂಬರ್‌ 1 ಸಾಫ್ಟ್‌ವೇರ್ ಕಂಪನಿಯಾಗಿ ಬೆಳೆದಿದೆ. Windows, Office Suite ಮುಂತಾದ ಉತ್ಪನ್ನಗಳು ಕೇವಲ ಕಂಪ್ಯೂಟರ್ ಕ್ಷೇತ್ರವಲ್ಲದೆ, ಜಗತ್ತಿನ ಪ್ರತಿಯೊಬ್ಬ ಬಳಕೆದಾರನ ಬದುಕಿನಲ್ಲಿ ಬದಲಾವಣೆ ತಂದಿವೆ. ಗೇಟ್ಸ್ ಅವರು CEO ಸ್ಥಾನದಿಂದ ಹಿಮ್ಮೆಟ್ಟಿದರೂ, ಗೇಟ್ಸ್ ಫೌಂಡೇಶನ್ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆ ಕ್ಷೇತ್ರಗಳಲ್ಲಿ ಅಪಾರ ಕೆಲಸ ಮಾಡುತ್ತಿದ್ದಾರೆ. ಅವರು ಮಾನವೀಯತೆ ಮತ್ತು ತಂತ್ರಜ್ಞಾನ ಎರಡನ್ನೂ ಸಮಾನವಾಗಿ ಮುನ್ನಡೆಸಿದ ಕಿರ್ತಿಮಾನರಾಗಿದ್ದಾರೆ.

Leave a Reply

Your email address will not be published. Required fields are marked *